ಕುಮಟಾ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇವರ ಸಹಯೋಗದೊಂದಿಗೆ ಕುಮಟಾದ ಬಿಜಿಎಸ್ ಕೇಂದ್ರೀಯ ವಿದ್ಯಾಲಯ ಮಿರ್ಜಾನ್‌ದಲ್ಲಿ ಜರುಗಿದ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ 2018-19ರಲ್ಲಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕೊಂಕಣದ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿ ಮಂಡ್ಯದಲ್ಲಿ ಜರುಗಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕವಿತಾ ಗೋಷ್ಠಿಯಲ್ಲಿ ಶಿಲ್ಪಾ ಡಿ. ಭಟ್ಟ ಪ್ರಥಮ, ಕಾರ್ತಿಕ ಪಿ. ನಾಯ್ಕ ದ್ವಿತೀಯ ಸ್ಥಾನಗಳಿಸಿದರೆ, ಕಥಾ ಗೋಷ್ಠಿಯಲ್ಲಿ ಪ್ರಗತಿ ಜಿ. ಹೆಗಡೆ ಪ್ರಥಮ ಹಾಗೂ ಚುಟುಕು ಗೋಷ್ಠಿಯಲ್ಲಿ ಸಂಜಯ ಡಿ. ನಾಯ್ಕ ಪ್ರಥಮ ಸ್ಥಾನಗಳಿಸುವುದರ ಮೂಲಕ ರಾಜ್ಯಮಟ್ಟದಲ್ಲಿ ಸ್ಪರ್ಧಿಸಲಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯಾಧ್ಯಾಪಕಿ, ಶಿಕ್ಷಕರು, ಶೈಕ್ಷಣಿಕ ಸಲಹೆಗಾರರು, ಪಾಲಕರು ಅಭಿನಂದಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಕೋರಿದ್ದಾರೆ.
Read MoreCategory: CVSK
ಕೊಂಕಣದ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಶಿಕ್ಷಕರಿಗೆ ಸನ್ಮಾನ
ಕುಮಟಾ: ಅಪರ ಆಯುಕ್ತಾಲಯ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ ಹಾಗೂ ಡಾ. ಎಚ್. ಎಫ್. ಕಟ್ಟೀಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ ಇವರ ಆಶ್ರಯದಲ್ಲಿ ಕುಮಟಾದ ಮಹಾತ್ಮಾ ಗಾಂಧಿ ಪ್ರೌಢಶಾಲೆ ಚಿತ್ರಿಗಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ, 2017-18ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿಯೇ ವಿಷಯವಾರು ಗರಿಷ್ಠ ಶೇಕಡಾವಾರು ಸರಾಸರಿ ಅಂಕಗಳನ್ನು ದಾಖಲಿಸಿದ ಕುಮಟಾದ ಪ್ರತಿಷ್ಠಿತ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ನಾಲ್ಕು ವಿಷಯ ಶಿಕ್ಷಕರನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಸವರಾಜ ಹೊರಟ್ಟಿಯವರು ಗೌರವಿಸಿ ಸನ್ಮಾನಿಸಿದರು. ವಿಷಯವಾರು ಬೋಧನೆಯ ಅನುಸಾರ ಇಂಗ್ಲೀಷ್ ವಿಷಯದಲ್ಲಿ ಶ್ರೀಮತಿ ವಿನಯಾ ನಾಯಕ ಶೇ.92.48, ಸಮಾಜ ವಿಜ್ಞಾನ ವಿಷಯದಲ್ಲಿ ಶ್ರೀ ಪ್ರಕಾಶ ಗಾವಡಿ ಶೇ.91.41, ಗಣಿತ ವಿಷಯದಲ್ಲಿ ಶ್ರೀ ರಾಜೇಶ ಎಚ್.ಜಿ ಶೇ.83.35, ಹಾಗೂ ವಿಜ್ಞಾನ ವಿಷಯದಲ್ಲಿ ಶ್ರೀ ಭಾಸ್ಕರ ಹೆಗಡೆ ಶೇ.74.1 ಸರಾಸರಿ ಶೇಕಡಾವಾರು ಅಂಕ…
Read Moreರಾಜ್ಯ ಮಟ್ಟಕ್ಕೆ ಕೊಂಕಣದ ಸಿ.ವಿ.ಎಸ್.ಕೆ ವಿದ್ಯಾರ್ಥಿಗಳು
ಕುಮಟಾ: ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ತನ್ನದೇ ವಿಶಿಷ್ಟ ಶೈಲಿಯಲ್ಲಿ ಛಾಪನ್ನು ಮೂಡಿಸುವಲ್ಲಿ ಸದಾ ಹೆಸರುವಾಸಿಯಾಗಿರುವ ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಾರವಾರದಲ್ಲಿ ಇತ್ತಿತ್ತೀಚೆಗೆ ಸಂಪನ್ನಗೊಂಡ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು, ಸಾ.ಶಿ.ಇಲಾಖೆ ಕಾರವಾರ, ಶೈಕ್ಷಣಿಕ ಜಿಲ್ಲೆ ಶಿರಸಿ ಹಾಗೂ ಜಿಲ್ಲಾ ವಿಜ್ಞಾನ ಕೇಂದ್ರ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ 26ನೇ ಜಿಲ್ಲಾ ಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಸ್ಪರ್ಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸ್ವಚ್ಛ ಹಸಿರು ಮತ್ತು ಆರೋಗ್ಯವಂತ ರಾಷ್ಟ್ರಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಹಾಗೂ ಆವಿಷ್ಕಾರಗಳು ಎಂಬ ಶೀರ್ಷಿಕೆಯಡಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಕುಮಾರಿ ಶಾಲ್ಮಲಿ ಎಸ್. ಮಂಕೀಕರ್ ಹಾಗೂ ಕುಮಾರಿ ಖುಷಿ ಸಿ. ಎಚ್. ಇವರು ಗ್ರಾಮೀಣ ಭಾಗದ ಸೀನಿಯರ್ಸ್ ವಿಭಾಗದಲ್ಲಿ ಸಕ್ಕರೆರೋಗ – ಕಾರಣಗಳು, ನಿರ್ವಹಣೆ…
Read Moreರಾಜ್ಯ ಮಟ್ಟದ ಸ್ಪರ್ಧೆಗೆ ಸಿ.ವಿ.ಎಸ್.ಕೆ ವಿದ್ಯಾರ್ಥಿಗಳು
ಕುಮಟಾ: ಅಂಕೋಲಾದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಇಲ್ಲಿನ ಪ್ರತಿಷ್ಠಿತ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಚಿಮ್ಮಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ವಸುಧಾ ಪ್ರಭು ಮರಾಠಿ ಭಾಷಣ, ಶಿಲ್ಪಾ ಪಟಗಾರ ರಂಗೋಲಿ, ಚಿನ್ಮಯಿ ಭಂಡಾರಿ ಸಂಗಡಿಗರು ಕಲೋತ್ಸವ ನೃತ್ಯ (ವೀರಗಾಸೆ)ದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟದ ಸ್ಪರ್ಧೆಗೆ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಉಳಿದಂತೆ, ಶ್ರೇಯಾ ಶಾನಭಾಗ ಧಾರ್ಮಿಕ ಪಠಣ, ನೇಹಾ ಶಾನಭಾಗ ಸಂಸ್ಕೃತ ಭಾಷಣ, ತೇಜಸ್ವಿನಿ ಶಾನಭಾಗ ತುಳು ಭಾಷಣದಲ್ಲಿ ದ್ವಿತೀಯ ಸ್ಥಾನ ಗಿಟ್ಟಿಸಿದರೆ, ಸುದಿತಿ ಕಾಮತ ಕೊಂಕಣಿ ಭಾಷಣದಲ್ಲಿ ತೃತೀಯ ಸ್ಥಾನ ಪಡೆಯುವುದರ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಶಾಲೆಯ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು, ಶೈಕ್ಷಣಿಕ ಸಲಹೆಗಾರರು, ಶಿಕ್ಷಕರು, ಪಾಲಕರು ಶ್ಲಾಘಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.
Read Moreಮೊಮ್ಮಕ್ಕಳೊಂದಿಗೆ ಹಿರಿಯ ಚೇತನಗಳ ಅಪೂರ್ವ ಸಂಗಮಕ್ಕೆ ನಾಂದಿ ಹಾಡಿದ ಕೊಂಕಣದ ‘ಪರಂಪರಾ ಕೂಟ’
ಕುಮಟಾ: ವೈವಿಧ್ಯಮಯ ಕಾರ್ಯಕ್ರಮಗಳು ಹಾಗೂ ವಿನೂತನ ಪ್ರಯೋಗಗಳ ಮೂಲಕ ಸಾಮಾಜಿಕ ಜಾಗೃತಿ ಹಾಗೂ ಶೈಕ್ಷಣಿಕ ಕ್ರಾಂತಿ ನಡೆಸುತ್ತಿರುವ ಕುಮಟಾದ ಪ್ರಸಿದ್ಧ ಶಿಕ್ಷಣ ಸಂಸ್ಥೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನಲ್ಲಿ, ರೌಪ್ಯ ಮಹೋತ್ಸವದ ಈ ಸುಸಂದರ್ಭದಲ್ಲಿ, ‘ಹಳೆ ಬೇರು-ಹೊಸ ಚಿಗುರು’ ಎಂಬ ಶೀರ್ಷಿಕೆಯಡಿಯಲ್ಲಿ ಶೈಕ್ಷಣಿಕ ಪರಿಸರದಲ್ಲಿ ಮೊಮ್ಮಕ್ಕಳೊಂದಿಗೆ ಹಿರಿಯ ಚೇತನಗಳ ಅಪೂರ್ವ ಸಂಗಮ ಕಾರ್ಯಕ್ರಮ ಅಭೂತಪೂರ್ವವಾಗಿ ಜರುಗಿ ಯಶಸ್ವಿಯಾಯಿತು. ‘ದೀಪಾವಳಿ ಮೇಳ’ದ ಅಂಗವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಬೆಳಿಗ್ಗೆ ನಡೆಯಿತು. ಕಾರ್ಯಕ್ರಮವನ್ನು ಉದ್ಯಮಿ, ಶಿಕ್ಷಣ ಪ್ರೇಮಿ ಹಾಗೂ ಗುರುಪ್ರಸಾದ ಪ್ರೌಢಶಾಲೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಜಯಂತ ನಾಯ್ಕ ಉದ್ಘಾಟಿಸಿದರು. ಸಂಸ್ಥೆಯ ಕುರಿತಾಗಿ ಹೆಮ್ಮೆಯ ಮಾತಗಳನ್ನಾಡಿದ ಅವರು, ತಮ್ಮ ಮೊಮ್ಮಕ್ಕಳು ಇದೇ ಸಂಸ್ಥೆಯಲ್ಲಿ ಕಲಿಯುತ್ತಿದ್ದು ಅವರಲ್ಲಿ ಸಂಸ್ಕೃತಿ ಮೂಡುವಲ್ಲಿ ಶಿಕ್ಷಕರು ಹಾಗೂ ಸಂಸ್ಥೆಯವರ ಕಾರ್ಯ, ಕಾಳಜಿ ಶ್ಲಾಘನೀಯ ಎಂದು ನಿದರ್ಶನ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ರಜತ…
Read Moreಕೊಂಕಣದ ಸಿ.ವಿ.ಎಸ್.ಕೆ ಪ್ರೌಢಶಾಲೆ ಜಿಲ್ಲಾ ಮಟ್ಟಕ್ಕೆ
ಕುಮಟಾ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲಾ ವಿದ್ಯಾರ್ಥಿಗಳು ನೆಲ್ಲಿಕೇರಿಯಲ್ಲಿ ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಸಾಧನೆಗೈದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಒಟ್ಟೂ 14 ವಿಭಾಗಗಳಲ್ಲಿ ಸ್ಪರ್ಧಿಸಿ, ಉತ್ತಮ ಸಾಧನೆ ಮಾಡಿದ ಶಾಲೆಯ ವಿದ್ಯಾರ್ಥಿಗಳ ವಿವರ ಹೀಗಿದೆ: ಮರಾಠಿ ಭಾಷಣದಲ್ಲಿ ವಸುಧಾ ಪ್ರಭು, ಹಿಂದಿಯಲ್ಲಿ ವೈಷ್ಣವಿ ಗುಡಿಗಾರ, ತುಳುವಿನಲ್ಲಿ ತೇಜಸ್ವಿನಿ ಶಾನಭಾಗ, ಕೊಂಕಣಿಯಲ್ಲಿ ಸುದಿತಿ ಕಾಮತ, ಸಂಸ್ಕೃತದಲ್ಲಿ ನೇಹಾ ಶಾನಭಾಗ ಪ್ರಥಮ ಸ್ಥಾನ ಗಳಿಸಿದರೆ, ಧಾರ್ಮಿಕ ಪಠಣದಲ್ಲಿ ಶ್ರೇಯಾ ಶಾನಭಾಗ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ಶಿಲ್ಪಾ ಪಟಗಾರ ಪ್ರಥಮರಾಗಿ ಜಿಲ್ಲಾ ಮಟ್ಟಕ್ಕೆ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಇನ್ನು, ಜನಪದಗೀತೆಯಲ್ಲಿ ವಸುಧಾ ಪ್ರಭು, ಮಿಮಿಕ್ರಿಯಲ್ಲಿ ಕೌಶಿಕ ನಾಯಕ, ಭರತನಾಟ್ಯದಲ್ಲಿ ಕಾವ್ಯಾ ಹೆಗಡೆಕಟ್ಟೆ, ಪಿಕ್ ಆಂಡ್ ಸ್ಪೀಚ್‌ನಲ್ಲಿ ಕಾರ್ತಿಕ ನಾಯ್ಕ, ಇಂಗ್ಲೀಷ್ ಭಾಷಣದಲ್ಲಿ ವಿ.ಎನ್.ಸಮೀಕ್ಷಾ, ಕನ್ನಡ ಭಾಷಣದಲ್ಲಿ ಚಿನ್ಮಯಿ ಭಂಡಾರಿ…
Read Moreತಾಲೂಕಾ ಮಟ್ಟದಲ್ಲಿ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಸಾಧನೆ
ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಸಂಘಟನೆಯಲ್ಲಿ ಕುಮಟಾದ ಮಹಾತ್ಮಾಗಾಂಧಿ ಮೈದಾನದಲ್ಲಿ ಇತ್ತೀಚಿಗೆ ನಡೆದ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಸಿ.ವಿ.ಎಸ್.ಕೆ ಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಗೈದಿದ್ದಾರೆ. 100 ಮೀ. ಓಟದಲ್ಲಿ ಸಾರ್ಥಕ ಪೈ ಪ್ರಥಮ, ಗುಂಡು ಎಸೆತದಲ್ಲಿ ತೃತೀಯ, ಆದರ್ಶ ನಾಯ್ಕ 100 ಮೀ. ಓಟದಲ್ಲಿ ದ್ವಿತೀಯ, ಉದ್ದಜಿಗಿತದಲ್ಲಿ ತೃತೀಯ, ತ್ರಿವಿಧ ಜಿಗಿತದಲ್ಲಿ ಪ್ರಥಮ, ಸಂಕಲ್ಪ ನಾಯ್ಕ 200 ಮೀ. ಹಾಗೂ 400 ಮೀ. ನಲ್ಲಿ ಪ್ರಥಮ, ಅನಿರುದ್ಧ ಭಟ್ಟಕೆರೆ 800 ಮೀ. ನಲ್ಲಿ ಪ್ರಥಮ, ಚರಣ ನಾಯ್ಕ 800 ಮೀ. ನಲ್ಲಿ ದ್ವಿತೀಯ ಹಾಗೂ ಭರ್ಚಿ ಎಸೆತದಲ್ಲಿ ದ್ವಿತೀಯ, ತಿಲಕ ನಾಯ್ಕ ಎತ್ತರ ಜಿಗಿತದಲ್ಲಿ ತೃತೀಯ, ಸುಹಾಗ ಭಂಡಾರಿ ಚಕ್ರ ಎಸೆತದಲ್ಲಿ ತೃತೀಯ, ನಿಸರ್ಗ ನಾಯ್ಕ 100 ಮೀ. ಓಟದಲ್ಲಿ ದ್ವಿತೀಯ, ಸಹನಾ ನಾಯ್ಕ 200 ಮೀ. ನಲ್ಲಿ ತೃತೀಯ, ಬಾಲಕಿಯರ 4×100…
Read Moreಕೊಂಕಣದಲ್ಲಿ ಜಲಜಾಗೃತಿ ಸಂಘದ ಉದ್ಘಾಟನೆ
ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ಸೆಲ್ಕೊ ಫೌಂಡೇಶನ್ ಬೆಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ಸಂಗಮ ಸೇವಾ ಸಂಸ್ಥೆ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ‘ಶರಧಿ ಜಲಜಾಗೃತಿ ಸಂಘ’ವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೀತಾರಾಮ ಶೆಟ್ಟಿ, ಇಂದಿನ ದಿನಗಳಲ್ಲಿ ಮಾನವನ ಬಳಕೆಗೆ ದೊರೆಯುವ ಶುದ್ಧ ನೀರಿನ ಪ್ರಮಾಣ ಅತ್ಯಂತ ಕಡಿಮೆ ಇದ್ದು ನಾವೆಲ್ಲಾ ಅತ್ಯಂತ ಜಾಗರೂಕತೆಯಿಂದ ಬಳಸುವದು ಅತ್ಯಂತ ಅವಶ್ಯಕ ಹಾಗೂ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಇಂತಹ ಸಂಘಗಳ ಸ್ಥಾಪನೆ ಪೂರಕವಾಗುವದು ಎಂದು ನುಡಿದರು. ಶಿಕ್ಷಕ ಶಿವಾನಂದ ಭಟ್ಟ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಕಾರ್ಯದರ್ಶಿಗಳಾದ ಮುರಲೀಧರ ಪ್ರಭು ವಹಿಸಿದ್ದರು. ವೇದಿಕೆಯಲ್ಲಿ ಸಿ.ವಿ.ಎಸ್.ಕೆಯ ಮುಖ್ಯಾಧ್ಯಾಪಕಿ ಸುಮಾ ಪ್ರಭು, ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್.ದೇಶಭಂಡಾರಿ, ಶ್ರೀನಿವಾಸ ಭಟ್ಟ ಉಪಸ್ಥಿತರಿದ್ದರು. ರವೀಂದ್ರ ಶೆಟ್ಟಿ ಸ್ವಾಗತಿಸಿದರು, ಶಿವಾನಂದ ಭಟ್ಟ ವಂದಿಸಿದರು, ಶಿಕ್ಷಕ…
Read Moreಜಿಲ್ಲೆಯ ವೇಗದ ಓಟದಲ್ಲಿ ‘ಸಾರ್ಥಕ’ತೆಯನ್ನು ಮೆರೆದ ಕೊಂಕಣದ ಸಿ.ವಿ.ಎಸ್.ಕೆ ಪ್ರೌಢಶಾಲೆ
ಕುಮಟಾ: ಇತ್ತೀಚೆಗೆ ಕಾರವಾರದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕೊಂಕಣದ ಸಿ.ವಿ.ಎಸ್.ಕೆ ಪ್ರಾಢಶಾಲೆಯ ಸಾರ್ಥಕ ಪೈ 100ಮೀ. ಹಾಗೂ ಅನಿರುದ್ಧ ಭಟ್ಟಕೆರೆ 800ಮೀ. ಓಟದ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲೆಯ ಅತೀ ವೇಗದ ಓಟಗಾರರೆಂಬ ಹೆಗ್ಗಳಿಕೆಗೆ ಪಾತ್ರರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅದಕ್ಕೆ ಪೂರಕವೆಂಬಂತೆ, ಶಾಲೆಯ ಆದರ್ಶ ನಾಯ್ಕ ಹಾಗೂ ದೀಕ್ಷಾ ನಾಯ್ಕ ಇವರು ಕ್ರಮವಾಗಿ ತ್ರಿವಿಧ ಜಿಗಿತ ಮತ್ತು ಚದುರಂಗದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ತಮ್ಮ ಹೆಸರನ್ನು ದಾಖಲಿಸಿದ್ದಾರೆ. 200ಮೀ. ಓಟದ ಸ್ಪರ್ಧೆಯಲ್ಲಿ ಸಂಕಲ್ಪ ನಾಯಕ ಈತನು ದ್ವಿತೀಯ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಅರ್ಹನಾಗಿದ್ದಾನಲ್ಲದೆ, ಬಾಲಕಿಯರ 200ಮೀ. ರಿಲೇಯಲ್ಲಿ ಶಾಲೆಯು ದ್ವಿತೀಯ ಸ್ಥಾನಗೈದು ಕ್ರೀಡಾಕೂಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಶೈಕ್ಷಣಿಕ, ಸಾಂಸ್ಕೃತಿಕ…
Read Moreಕೊಂಕಣದ ಸಿ.ವಿ.ಎಸ್.ಕೆ ರಾಜ್ಯ ಮಟ್ಟಕ್ಕೆ
ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ದಿ. 20-09-2018 ರಂದು ಕುಮಟಾದ ಡಯೆಟ್‍ನಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಶಾಲೆಯ ವಿಜ್ಞಾನ ಶಿಕ್ಷರುಗಳಾದ ರವಿಶಂಕರ ಹಾಗೂ ಭಾಸ್ಕರ ಹೆಗಡೆ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಪ್ರಮೋದ ಎಲ್. ಹಾಗೂ ಸೂರ್ಯಕಿರಣ ಎನ್. ಇವರು ಸಾರಿಗೆ ಮತ್ತು ಸಂಪರ್ಕ ವಿಜ್ಞಾನ ವಿಷಯದಡಿ ತಯಾರಿಸಿದ ಅದ್ಭುತ ಮಾದರಿ ಎಲ್ಲರ ಮನಸೂರೆಗೊಂಡಿತಲ್ಲದೆ, ನಿರ್ಣಾಯಕರ ಪ್ರಶಂಸೆಗೂ ಪಾತ್ರವಾಯಿತು. ಶೈಕ್ಷಣಿಕ ವಿಚಾರದ ದೂರದೃಷ್ಟಿತ್ವದಲ್ಲಿ ಸದಾ ಮುಂಚೂಣಿಯಲ್ಲಿರುವ ಕೊಂಕಣದ ಸಿ.ವಿ.ಎಸ್.ಕೆ ಗೆ ಮತ್ತೊಂದು ಹೆಮ್ಮೆಯ ಸಾಧನೆಯ ಗರಿ ಇದಾಗಿದ್ದು, ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯಾಧ್ಯಾಪಕರು, ಶಿಕ್ಷಕರು ಅಭಿನಂದನೆಗಳನ್ನು ಸಲ್ಲಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.
Read More